ಶಂಖ್ ಬಗ್ಗೆ
ನಮಸ್ಕಾರ 🙏
ನಮ್ಮ ಹಿಂದೂ ಸಂಸ್ಕೃತಿಯಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ಸಂಪ್ರದಾಯಗಳನ್ನು ಮತ್ತೆ ಪ್ರತಿ ಮನೆಗೂ ತಲುಪಿಸಬೇಕೆಂಬ ನಮ್ಮ ಪುಟ್ಟ ಪ್ರಯತ್ನವೇ ಶಂಖ್.
ಇಂದು ನಮ್ಮಲ್ಲಿ ಬಹಳಷ್ಟು ಜನ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳನ್ನು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರವೇ ಆಚರಿಸುತ್ತೇವೆ. ಆದರೆ ನಮ್ಮ ಧರ್ಮ ಅವುಗಳನ್ನು ತಿಥಿಯ ಪ್ರಕಾರ ಆಚರಿಸಬೇಕೆಂದು ಹೇಳುತ್ತದೆ. ಆ ತಿಥಿ ಯಾವ ದಿನ ಬರುತ್ತದೆ ಎಂದು ತಿಳಿಯದೆ, ನಮ್ಮ ಹಿರಿಯರ ವಿಶೇಷ ದಿನಗಳನ್ನೂ, ಶ್ರಾದ್ಧ ಕರ್ಮಗಳನ್ನೂ ನಿಧಾನವಾಗಿ ಮರೆಯುತ್ತಿದ್ದೇವೆ.
ಹೇಳಿಕೊಡಲು ಹತ್ತಿರದಲ್ಲಿ ಹಿರಿಯರು ಇಲ್ಲದೆ, ಎಷ್ಟೋ ಕುಟುಂಬಗಳು ಮನೆಯಲ್ಲಿ ಒಂದು ಸರಳ ನಿತ್ಯ ಪೂಜೆಯನ್ನೂ ಮಾಡಿಕೊಳ್ಳಲಾಗುತ್ತಿಲ್ಲ. ದಿನದ ಪಂಚಾಂಗ ನೋಡಲು, ಒಳ್ಳೆಯ ಮುಹೂರ್ತ ತಿಳಿಯಲು ಸುಲಭ ದಾರಿ ಇಲ್ಲದೆ, ಅವನ್ನೂ ನಿಧಾನವಾಗಿ ಬಿಟ್ಟುಬಿಡುತ್ತಿದ್ದೇವೆ.
ಪಂಚಾಂಗ, ಸರಿಯಾದ ದಿನದಂದು ಹಬ್ಬಗಳು ಮತ್ತು ವ್ರತಗಳು, ವೇದ ಮಂತ್ರಗಳು, ಅಷ್ಟೋತ್ತರಗಳು, ಸ್ತೋತ್ರಗಳು ಹಾಗೂ ಹಂತ ಹಂತದ ಪೂಜಾ ಮಾರ್ಗದರ್ಶಿಗಳನ್ನು ನಿಮ್ಮದೇ ಭಾಷೆಯಲ್ಲಿ ನಿಮ್ಮ ಬಳಿಗೆ ತಂದು, ಅವು ನಿಮ್ಮ ದಿನನಿತ್ಯದ ಜೀವನದ ಭಾಗವಾಗುವಂತೆ ಮಾಡುತ್ತದೆ ಶಂಖ್.
ಬನ್ನಿ, ನಾವೆಲ್ಲರೂ ಸೇರಿ ಈ ಸಂಪ್ರದಾಯಗಳನ್ನು ಉಳಿಸೋಣ, ನಮ್ಮ ಧರ್ಮವನ್ನೂ ಹಿಂದೂ ಜ್ಞಾನ ಸಂಪತ್ತನ್ನೂ ಮುಂದಿನ ಪೀಳಿಗೆಗಳಿಗೆ ತಲುಪಿಸೋಣ.
ಶಂಖ್ ಅನ್ನು ಭಾರತದ ವಿಶಾಖಪಟ್ಟಣದ Sutrixs Global Private Limited ತಯಾರಿಸಿದೆ.